articles

ಹೀಗೆಂದರು ಆಚಾರ್ಯ ಶಂಕರರು

ಹೀಗೆಂದರು ಆಚಾರ್ಯ ಶಂಕರರು: (ಶ್ರೀಮಚ್ಛಂಕರಾಚಾರ್ಯ ವಿರಚಿತ ‘ಪರಪೂಜಾ’ ಸ್ತೋತ್ರದ ಭಾವಾನುವಾದ -ಶ್ರುತಿಪ್ರಿಯ

ಪೂರ್ಣಸ್ಯಾವಾಹನಂ ಕುತ್ರಾ |

ಸರ್ವಾಧಾರಸ್ಯ ಚ ಆಸನಂ |

ಸ್ವಚ್ಛಸ್ಯ ಪಾದ್ಯಮರ್ಘ್ಯಂಚ |

ಶುದ್ಧಸ್ಯಾಚಮನಂ ಕುತಃ || 1 ||

ಪೂರ್ಣನಿಗೆ ಆವಾಹನೆ ಎಲ್ಲಿ ?
ಸರ್ವಾಧಾರನಿಗೆ ಆಸನವು ?
ಸ್ವಚ್ಛನಾದವಗೆ ಪಾದ್ಯ-ಅರ್ಘ್ಯವು ?
ಶುದ್ಧನಿಗೆಲ್ಲಿಯ ಆಚಮನ ? || 1 ||


ನಿರ್ಮಲಸ್ಯ ಕುತಃ ಸ್ನಾನಂ

ವಸ್ತ್ರಂ ವಿಶ್ವೋದರಸ್ಯ ಚ

ನಿರಾಲಂಬಸ್ಯೋಪವೀತಂ

ಪುಷ್ಪಂ ನಿರ್ವಾಸನಸ್ಯ ಚ || 2 ||

ನಿರ್ಮಲನಾದಗೆ ಸ್ನಾನವು ಎಂತು ?

ವಿಶ್ವೋದರನಿಗೆ ವಸ್ತ್ರವದೆಂತು ?

ನಿರಾಲಂಬನಿಗೆ ಉಪವೀತವೆಂತು ?

ನಿರ್ವಾಸನಿಗೆ ಪುಷ್ಪವಿದೆಂತು ? || 2 ||


ನಿರ್ಲೇಪಸ್ಯ ಕುತೋ ಗಂಧೋ

ರಮ್ಯಸ್ಯಾಭರಣಂ ಕುತಃ

ನಿತ್ಯತೃಪ್ತಸ್ಯ ನೈವೇದ್ಯಃ

ತಾಂಬೂಲಂ ಚ ಕುತೋ ವಿಭೋಃ || 3 ||

ನಿರ್ಲೇಪನಿಗೆ ಗಂಧಲೇಪನ ?

ರಮ್ಯಾನಾದವಗೆ ಆಭರಣ ?

ನಿತ್ಯತೃಪ್ತನಿಗೆ ನೈವೇದ್ಯ ?

ಎಂತು ವಿಭುವಿಗೆ ತಾಂಬೂಲ ? || 3 ||


ಪ್ರದಕ್ಷಿಣಾ ಹ್ಯನಂತಸ್ಯ

ಹೃದ್ವಯಸ್ಯ ಕುತೋ ನತಿಃ

ವೇದವಾಕ್ಯೈರವೇದ್ಯಸ್ಯ

ಕುತಃ ಸ್ತೋತ್ರಂ ವಿಧೀಯತೇ || 4 ||

ಅನಂತನಿಗೆ ಪ್ರದಕ್ಷಿಣೆ ಎಂತು ?

ನಿನ್ನೊಳೇ ಇಹನಿಗೆ ನಮನವದೆಂತು ?

ವೇದವಾಣಿಗೂ ಆವೇದ್ಯನಾದಗೆ

ಎಂತು ಸ್ತೋತ್ರವದು ಸಂಭವವು ? || 4 ||


ಸ್ವಯಂ ಪ್ರಕಾಶಮಾನಸ್ಯ

ಕುತೋ ನೀರಾಜನಂ ವಿಭೋಃ

ಅಂತರ್ಬಹಿಶ್ಚ ಪೂರ್ಣಸ್ಯ

ಕತಮುದ್ವಾಸನಂ ಭವೇತ್ || 5 ||

ಸ್ವಯಂ ಪ್ರಕಾಶಮಾನನು ಈಶನು

ಅವನಿಗದೆಂತು ನೀರಾಜನ? (ಕರ್ಪೂರದ ಹಣತೆ)

ಒಳಗೂ ಹೊರಗೂ ಪೂರ್ಣನಾದವಗೆ

ಎಂತು ಸಾಧ್ಯವು ಉದ್ವಾಸನ ? || 5 ||


ಏವಮೇವ ಪರಪೂಜಾ

ಸರ್ವಾವಸ್ಥಾಸು ಸರ್ವದಾ

ಏಕಬುದ್ಧ್ಯಾತು ದೇವೇಶೇ

ವಿಧೇಯಾ ಬ್ರಹ್ಮವಿತ್ತಮೈಃ || 6 ||

ಈ ತೆರನಿರ್ಪ ಪರಾಪೂಜೆಯನು

ಎಲ್ಲ ಸ್ಥಿತಿಯೊಳೂ ಯಾವಾಗಲೂ

ನಿಶ್ಚಲ ಬುದ್ಧಿಯಿಂ, ಈಶನಾದವಗೆ

ಮಾಡಲಿ ಬ್ರಹ್ಮನ ಆರಿತವರು || 6 ||