ಯಜುರ್ವೇದ 36 – 3

Posted Posted in mantra

ಓಂ  ಭೂರ್ಭುವಃ ಸ್ವಃ | ತತ್ ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ || ಅರ್ಥ: “ಸರ್ವ ರಕ್ಷಕನೂ ಸರ್ವ ವ್ಯಾಪಕನೂ ಸರ್ವಜ್ಞ್ಯನೂ, ಸರ್ವೋಪಾಸ್ಯನೂ, ಸರ್ವ ಗಮ್ಯನೂ ಆದ ಪರಮಾತ್ಮನು ಪ್ರಾಣ ಸ್ವರೂಪನೂ , ಸರ್ವ ದುಃಖ ನಿವಾರಕನೂ, ಆನಂದಮಯ ಹಾಗೂ ಆನಂದದಾಯಕನೂ ಆಗಿದ್ದಾನೆ. ಸರ್ವೋತ್ಪಾದಕನಾದ ಆ ಪ್ರಕಾಶಮಯ ದೇವನ ಸ್ವೀಕರಣೀಯವಾದ ಪಾಪದಾಹಕವಾದ ಜ್ಯೋತಿಯನ್ನು ನಾವು ಧ್ಯಾನಿಸೋಣ ಮತ್ತು ಧರಿಸೋಣ. ಆ ಪರಮಾತ್ಮನು ನಮ್ಮ ಬುದ್ಧಿಗಳನ್ನು ಹಾಗೆಯೇ ಕರ್ಮಗಳನ್ನು ಉತ್ತಮ ಮಾರ್ಗದಲ್ಲಿ ಪ್ರೇರೇಪಿಸುತ್ತಿರಲಿ”

ಯಜುರ್ವೇದ – 40-15

Posted Posted in mantra

ವಾಯುರನಿಲಮಮೃತಮ್ ಅಥೇದಂ ಭಸ್ಮಾನ್ತಂ ಶರೀರಂ|  ಓಂ ಕ್ರತೋ ಸ್ಮರ ಕ್ಲಿಬೇ ಸ್ಮರ ಕೃತಂ ಸ್ಮರ || ಅರ್ಥ: “ಓ ಕರ್ಮಶೀಲನಾದ ಜೀವ! ನೀನು ಶರೀರವನ್ನು ತ್ಯಜಿಸುವ ಸಮಯದಲ್ಲಿ ಓಂ ನಾಮವನ್ನು ಸ್ಮರಿಸು. ನಿನ್ನ ಸಾಮರ್ಥ್ಯಕ್ಕಾಗಿ ಪರಮಾತ್ಮನನ್ನು ಹಾಗೂ ನಿನ್ನ ಸ್ವರೂಪವನ್ನು ಸ್ಮರಿಸು. ಈ ಸಂಸ್ಕಾರದ ಧನಂಜಯಾದಿ ರೂಪೀ ವಾಯುವನ್ನು, ಕಾರಣರೂಪ ವಾಯುವನ್ನು, ಅವಿನಾಶಿಯಾದ ವಾಯುವನ್ನು ಧಾರಣ ಮಾಡುತ್ತಾ, ಇದರ ಅನಂತರ ಈ ನಾಶ ಹೊಂದುವ, ಸುಖಾದಿಗಳಿಗೆ ಆಶ್ರಯವಾದ ಶರೀರವನ್ನು ಅಂತ್ಯದಲ್ಲಿ ಭಸ್ಮವಾಗಲಿರುವುದೆಂದು ತಿಳಿ”