Arya Samaja

ಆರ್ಯ ಸಮಾಜ, ಶ್ರದ್ಧಾನಂದ ಭವನ, ಬೆಂಗಳೂರು – ನಡೆದು ಬಂದ ಹಾದಿ:
೧೮೭೫, ಮುಂಬಯಿಯು ಒಂದು ಐತಿಹಾಸಿಕ ಆಂದೋಲನಕ್ಕೆ ಸಾಕ್ಷಿ ಆಯಿತು. ವಿದೇಶೀಯರ ದಾಸ್ಯಕ್ಕೆ ಸಿಕ್ಕಿದ್ದ ಭಾರತವುತನ್ನ ಶತ-ಶತಮಾನಗಳನಿದ್ರೆಯಿಂದ ಎಚ್ಚರಗೊಂಡು ಕ್ರಾಂತಿಕಾರೀ ಹೆಜ್ಜೆ ಇರಿಸಿದ ವರ್ಷವದು. ಗುಲಾಮಗಿರಿಯ ಕಂಬಳಿ ಹೊದ್ದು ಶವ ನಿದ್ದೆಯಲ್ಲಿ ಮಲಗಿದ್ದವರನ್ನುಬಡಿದೆಚ್ಚರಿಸಿದ ಆರ್ಯ ಸಮಾಜ ಆಂದೋಲನವನ್ನು ಮಹರ್ಷಿ ದಯಾನಂದ ಸರಸ್ವತಿಯವರು ಹುಟ್ಟು ಹಾಕಿದ ವರ್ಷವದು. ಭಾರತವು ಅಷ್ಟು ಹೊತ್ಥಿಗಾಗಲೇಹಲವಾರು ಸಮಾಜ ಸುಧಾರಣೆಯಚಿಂತನೆಗಳ ಮೂಲಕ ತನ್ನನ್ನು ನವೋದಯಕ್ಕೆ ತೆರೆದುಕೊಳ್ಳುತ್ತಿದ್ದ ಕಾಲ. ಆರ್ಯ ಸಮಾಜಾವು ಸಹ ಈ ಸಮಾಜ ಸುಧಾರಣೆಯ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು ಅಗ್ರಣಿಯ ಪಾತ್ರವಹಿಸಿತು.ಅಸ್ಪೃಶ್ಯತೆ, ಜಾತಿ ಪದ್ಧತಿಯ ಮೇಲು, ಕೀಳು ಭಾವನೆ, ಸ್ತ್ರೀಯರ ಶೋಚನೀಯ ಸ್ಥಿತಿ, ಇವೆಲ್ಲದರ ಪರಿಣಾಮವಾಗಿ ಕ್ರೈಸ್ತ-ಇಸ್ಲಾಮೀ ಮತಗಳಿಗೆ ಮತಾಂತರ, ದೇವರು-ಧರ್ಮಗಳ ಕುರಿತಾದ ಮೂಢ ನಂಬಿಕೆಗಳು, ಪರಸ್ಪರರಲ್ಲಿ ಜಗಳ, ಇವೆಲ್ಲಕ್ಕೂ ಕಳಸವಿಟ್ಟಂತೆ ವಿದೇಶಿದಾಸ್ಯ – ಗುಲಾಮಗಿರಿ ಇವು ಭಾರತೀಯ ಸಮಾಜವನ್ನು ನುಂಗಿ ನೊಣೆಯುತ್ತಿರುವಾಗ ಇದ್ಧಕ್ಕೆ ಸುಮುಚಿತ ಉತ್ತರವೆಂಬಂತೆ ಮೂಡಿಬಂದಿದ್ಧುಮಹರ್ಷಿ ದಯಾನಂದ ರ ಆರ್ಯ ಸಮಾಜ. ಸತ್ಯ ಸನಾತನ ವೈದಿಕ ಧರ್ಮದ ವಾಸ್ತವಿಕ ಸ್ವರೂಪವನ್ನು ಎತ್ತಿ ಹಿಡಿದುದಲ್ಲದೆ ಅದರ ಮೂಲವು ನಿರ್ಮಲವಾದ , ವೈಜ್ಞಾನಿಕ, ಸಾರ್ವಭೌಮ, ಸಾರ್ವಕಾಲಿಕ ಜ್ಞಾನ ಭಂಡಾರವಾದ ವೇದಗಳು – ಎಂಬುದನ್ನು ಮಹರ್ಷಿ ದಯಾನಂದರು ಸಾರಿದರು. ಯೂರೋಪಿನಲ್ಲಿ ಹಾಗೂ ಭಾರತದಲ್ಲಿ ನಡೆಯುತ್ತಿದ್ದಪ್ರಗತಿಪರ ಚಿಂತನೆ ಹಾಗೂ ಸಮಾಜ ಸುಧಾರಣೆಗಳ ಅಗ್ರಣಿಯಾಗಿ ಆರ್ಯ ಸಮಾಜ ಬೆಳೆದು ಬಂತು. ಈ ಎಲ್ಲ ಪ್ರಗತಿಪರ ಚಿಂತನೆಗೆ ಆಧಾರವಾದುದು ವೇದಗಳು, ಪಾಶ್ಚಿಮಾತ್ಯರ ದರ್ಶನವಲ್ಲ ಎಂದು ಜಗತ್ತಿಗೆಸಾರಿದುದು ಆರ್ಯ ಸಮಾಜ. ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಮಹತ್ವದ ಅಗ್ರಗಣ್ಯ ಪಾತ್ರವನ್ನು ನಿರ್ವಹಿಸಿದುದು ಆರ್ಯ ಸಮಾಜದ ಹೆಗ್ಗಳಿಕೆ. ಈ ಮೂಲಕ ‘ಮರಳಿ ವೇದದ ಕಡೆಗೆ’ ಎಂಬ ಕರೆಯನ್ನು ಜನತೆಗಿತ್ತು ನಮ್ಮ ಪ್ರಾಚೀನ ಧರ್ಮ-ಸಂಸ್ಕೃತಿಗಳ ಬಗೆಗೆ ಅಭಿಮಾನವನ್ನು ಮೂಡಿಸಿದುದು ಆರ್ಯ ಸಮಾಜ. ಈ ಎಲ್ಲ ಲೋಕ ಕಲ್ಯಾಣದ ಹಿರಿಮೆಯನ್ನು ಪ್ರಚಾರ ಮಾಡುತ್ತಾ ಕ್ರಾಂತಿಯ ಕಹಳೆಯನ್ನು ಊದುತ್ತಾ ಪಂಜಾಬ್, ಉತ್ತರ ಪ್ರದೇಶ , ಮಧ್ಯ ಪ್ರದೇಶ, ಬಿಹಾರ, ಬಂಗಾಳ, ಮಹಾರಾಷ್ಟ್ರಗಳಲ್ಲಿ ಮಿಂಚಿನ ಸಂಚಾರ ಮಾಡಿದರು ಮಹರ್ಷಿ ದಯಾನಂದರು. ೧೮೮೩ರಲ್ಲಿ ರಾಜಸ್ಥಾನ ಪ್ರದೇಶಕ್ಕೆ ಅಡಿಯಿಟ್ಟು ಎಲ್ಲೆಡೆ ವೈದಿಕ ಧರ್ಮ ಪ್ರಚಾರ ಮಾಡುತ್ತಾ ಜೋದ್ಧಾಪುರದಲ್ಲಿ ಮಾನವೀಯತೆಯ ದ್ರೋಹಿಗಳಿಂದ ವಿಷ ಪ್ರಾಶನ ಮಾಡಿಸಲ್ಪಟ್ಟು , ನಂತರ ಅಜಮೇರ ನಗರದಲ್ಲಿ ತಮ್ಮ ೫೯ನೆಯ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಮಹರ್ಷಿ ದಯಾನಂದರ ಅಕಾಲಿಕ ನಿಧಾನದಿಂದಾಗಿ ಅವರು ಹಮ್ಮಿಕೊಂಡ ಹಲವಾರು ಕಾರ್ಯಗಳು ಅದರಲ್ಲಿಯೂ ಮುಖ್ಯವಾಗಿ ವೇದಗಳಿಗೆ ಬುಧ್ಧಿ ಸಂಗತ – ವೈಜ್ಞ್ಯನಿಕ ಭಾಷ್ಯ ಹಾಗೂ ದಕ್ಷಿಣ ಭಾರತದಲ್ಲಿ ವೈದಿಕ ಧರ್ಮ ಪ್ರಚಾರಕ್ಕೆ ದೊಡ್ಡ ಆಘಾತವಾಯಿತೆಂಬುದು ನಿಜವಾದರೂ ಅವರ ಕ್ರಾಂತಿಕಾರೀ ವಿಚಾರಗಳು ಅದರಲ್ಲಿಯೂ ಮುಖ್ಯವಾಗಿ ವೇದಗಳಿಗೆ ಬುದ್ಧಿ ಸಂಗತ- ವೈಜ್ಞಾನಿಕ ಭಾಷ್ಯ ಹಾಗೂ ದಕ್ಷಿಣ ಭಾರತದಲ್ಲಿ ವೈದಿಕ ಧರ್ಮ ಪ್ರಚಾರಕ್ಕೆ ದೊಡ್ಡ ಆಘಾತ ವಾಯಿತೆಂಬುದು ನಿಜವಾದರೂ ಅವರ ಕ್ರಾಂತಿಕಾರೀ ವಿಚಾರಗಳು ಅವರ ನಂತರವೂ ನಳನಳಿಸತೊಡಗಿದವು . ಅವರ ಚಿಂತನೆಗಳಿಂದ ಪ್ರಧಾವಿತರಾದ ನೂರಾರು ಶಿಷ್ಯರು ದೇಶದ ಮೂಲೆಮೂಲೆಗಳಿಗೆ ಮಾತ್ರವಲ್ಲದೆ , ವಿದೇಶಗಳಿಗೂ ವೇದ ಜ್ಯೋತಿಯನ್ನು ಕೊಂಡೊಯ್ದರು . ಅದರ ಫಲವಾಗಿ ದೂರದ ಮಾರಿಷಸ್, ಫಿಜಿ, ದಕ್ಷಿಣ ಆಫ್ರಿಕಾ, ಕೆನ್ಯಾ, ನೈರೋಬಿ, ಬ್ರಿಟಿಷ್ ಗಯಾನ, ಸುರಿನಾಮ್, ತ್ರಿನಿಡಾಡ್ ಮೊದಲಾದ ದೇಶಗಳಲ್ಲಿ ಆರ್ಯ ಸಮಾಜವು ಸ್ಥಾಪಿತವಾಗಿ ಮಹರ್ಷಿ ದಯಾನಂದರ ವೇದ ಸಂದೇಶ ಹರಡತೊಡಗಿತು. ನಿಧಾನವಾಗಿ ಯೂರೋಪ್, ಅಮೆರಿಕ, ಬರ್ಮ, ಥೈಲ್ಯಾಂಡ್, ಸಿಂಗಪುರ್, ಮಲೇಷಿಯ ಗಳಲ್ಲಿಯೂ ಆರ್ಯ ಸಮಾಜ ಕಾರ್ಯವೆಸಗತೊಡಗಿತು. “ಕೃಣ್ವಂತೋ ವಿಶ್ವಮ್ ಆರ್ಯಮ್ “ ಎಂಬ ವೇದದ ಜಯಘೋಷ ಎಲ್ಲೆಡೆ ಅನುರಣಿತವಾಯಿತು. 
ಕರ್ನಾಟಕದಲ್ಲಿಯೂ ವೇದಗಳ ಮಧುರ ನಿನಾದ ಕೇಳಿಬರಲು ತಡವಾಗಲಿಲ್ಲ. ಪುಣೆಯಲ್ಲಿ ಮಹರ್ಷಿ ದಯಾನಂದರನ್ನು ಭೇಟಿ ಮಾಡಿದ ಮೊದಲ ವ್ಯಕ್ತಿ ರಾಯಚೂರಿನ ಕೃಷ್ಣಾಚಾರ್ಯ ಎಂಬ ಮಾಧ್ವ ವಿದ್ವಾಂಸರು ಎಂಬುದಾಗಿ ಇತಿಹಾಸಜ್ಞ್ಯ ಪ್ರೊಫೆಸರ್ ರಾಜೇಂದ್ರ ಜಿಜ್ಞ್ಯಾಸು ತಿಳಿಸುತ್ತಾರೆ.

ಅದೇ ರೀತಿ ಮೈಸೂರಿನ ದಿವಾನ್ ಬಹಾದುರ್ ರಘುನಾಥ್ ರಾಯರು ಮಹರ್ಷಿ ದಯಾನಂದರನ್ನು ಭೇಟಿ ಮಾಡಿದ ವಿಷಯವನ್ನು ಅವರೇ ಒಂದು ಲೇಖನದಲ್ಲಿ ತಿಳಿಸಿದ್ಧಾರೆ. ಹಾಗೆಯೇ ಮೈಸೂರಿನ ದಿವಾನ್ ಟಿ. ಮಾಧವ ರಾವ್ ಹಾಗೂ ದಿವಾನ್ ರಘುನಾಥ ರಾಯರು ಮಹರ್ಷಿ ದಯಾನಂದರ ವೇದ ಭಾಷ್ಯಕ್ಕಾಗಿ ಧನ ಸಹಾಯ ಮಾಡಿರುವುದು ಕಂಡು ಬರುತ್ತದೆ. 
ಈ‌ ಸಂದರ್ಭದಲ್ಲಿ ಒಂದು ವಿಷಯವನ್ನು ಇಲಿ ಸ್ಪಷ್ಟಪಡಿಸಬೇಕಾಗಿದೆ. ಲೋಕಕ್ಕೆ ಅಗತ್ಯವಾದ, ಅನುಪಮವಾದ, ಚಿಂತನೆಯನ್ನು ಸಂಸ್ಕೃತಿಯನ್ನು ನೀಡಿದ ಭಾರತೀಯರು ಇತಿಹಾಸ ಲೇಖನದಲ್ಲಿ ಸದಾ ಹಿಂದೆ. ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ ಎಷ್ಟೋ ಮಹತ್ವದ ವಿಷಯಗಳು ಜಗತ್ತಿಗೆ, ಇಂದಿನ ಯುವ ಪೀಳಿಗೆಗೆ ತಿಳಿಯದೆ ಕಣ್ಮರೆಯಾಗಿವೆ. ಈ ಮಾತು ಆರ್ಯ ಸಮಾಜಕ್ಕೆ ಇನ್ನೂ ಚೆನ್ನಾಗಿ ಅನ್ವಯವಾಗುತ್ತದೆ. ಆರ್ಯ ಸಮಾಜದ ಭವ್ಯ ಇತಿಹಾಸವನ್ನು ಕಟ್ಟಿಕೊಡುವ ಮೂಲಕ ಅದರ ಹಿರಿಮೆಯನ್ನು ಇಂದಿನ ಜನತೆಗೆ ತಿಳಿಯಪಡಿಸುವುದು ಈ ಕಾರಣದಿಂದಾಗಿಯೇ ಕಷ್ಟ. ಆದರೂ ಅಳಿದುಳಿದ ದಾಖಲೆಗಳ ಮೂಲಕ ಬೆಂಗಳೂರಿನಲ್ಲಿ ಅದರಲ್ಲಿಯೂ ವಿಶ್ವೇಶ್ವರ ಪುರದ ಆರ್ಯ ಸಮಾಜದ ವಿವರಗಳನ್ನು ಪ್ರಸ್ತುತ ಪಡಿಸುತ್ಥಿದ್ದೇವೆ. 
ಮಹರ್ಷಿ ದಯಾನಂದರ ಬಲಿದಾನವಾದ ಹತ್ತು ವರ್ಷಗಳ ನಂತರ ೧೮೯೪ರಲ್ಲಿ ಆರ್ಯ ಸಮಾಜ ಆಂದೋಲನವು ಕರ್ನಾಟಕವನ್ನು, ಬೆಂಗಳೂರನ್ನು ಪ್ರವೇಶಿಸಿತು. ೧೮೯೪ರಲ್ಲಿ ಪಂಜಾಬಿನಿಂದ ಇಬ್ಬರು ತೇಜಸ್ವೀ ಯುವ ಸನ್ಯಾಸಿಗಳು ವೇದ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬಂದರು. ಅವರೇ ಸ್ವಾಮಿ ವಿಶ್ವೇಶ್ವರಾನಂದ ಹಾಗೂ ಸ್ವಾಮಿ ನಿತ್ಯಾನಂದಜೀ. ಇವರು ಮೈಸೂರಿನಲ್ಲಿ ವೇದ ಪ್ರಚಾರ ಮಾಡಲು ಮಹಾರಾಜರನ್ನು ಪ್ರೇರೇಪಿಸಿದ್ದರು. ಮೈಸೂರಿಗೆ ಹೋಗುವ ಮುನ್ನ ಬೆಂಗಳೂರಿಗೆ ಆಗಮಿಸಿದರು.

೧೮೯೪ರ ಅಕ್ಟೋಬರ್ ೨೦ರಂದು ಬೆಂಗಳೂರಿಗೆ ಆಗಮಿಸಿ ನವೆಂಬರ್ ೧೦ರಲ್ಲಿ ಇಲ್ಲಿ ಆರ್ಯ ಸಮಾಜ ವನ್ನು ಸ್ಥಾಪಿಸಿದರು. ಅದಾದ ನಂತರ ಅವರು ಬೆಂಗಳೂರು ಸಮೀಪದ ಕ್ಲೋಸ್ ಪೇಟ್ (ಇಂದಿನ ರಾಮನಗರ ) ಯಲ್ಲಿಯೂ ಆರ್ಯ ಸಮಾಜದ ಸ್ಥಾಪನೆ ಮಾಡಿದರು.
ಜಸ್ಟಿಸ್ ರಾಮಚಂದ್ರ ಐಯ್ಯರ್, ಶ್ರೀ ಜೆ. ನರಸಿಂಹ ಐಯ್ಯಂಗಾರ್, ಶ್ರೀ ಗಣೇಶ್ ಸಿಂಗ್ ಇವರುಗಳು ಸ್ವಾಮೀಜಿಯವರ ಪ್ರವಚನಗಳನ್ನು ಪುರಭವನ ಮುಂತಾದ ಕಡೆ ಏರ್ಪಡಿಸಿದ್ದಲ್ಲದೆ ೧೦-೧೧-೧೮೯೪ರಲ್ಲಿ ಆರ್ಯ ಸಮಾಜ ಸ್ಥಾಪನೆಗೆ ಸಹಯೋಗ ನೀಡಿದರು. ಬಸವನಗುಡಿ ಕಾನಕಾನಹಳ್ಳಿ ರಸ್ತೆಯಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ.
ಬೆಂಗಳೂರು ಆರ್ಯಸಮಾಜದ ಮೊದಲ ಪ್ರಧಾನರಾಗಿ ಶ್ರೀ ಠಾಕೂರ್ ಸಿಂಗ್ ವರ್ಮಾ, ಮಂತ್ರಿಗಳಾಗಿ ಶ್ರೀ ಪಿ. ಎಸ್. ಶೇಷಗಿರಿ ರಾವ್ ಅವರು ಕಾರ್ಯ ನಿರ್ವಹಿಸಿದ್ದರು. ಈ ಕಾಲದಲ್ಲಿಯೇ ಸ್ವಾಮಿ ಆತ್ಮಾನಂದರು ವೈದಿಕ ಧರ್ಮ ಪ್ರಚಾರಕ್ಕೆ ಆಗಮಿಸಿದ್ದುದು ಕಂಡು ಬರುತ್ತದೆ. 
೧೯೨೪ರಲ್ಲಿ ಮತ್ತು ೧೯೨೫ರಲ್ಲಿ ಸ್ವಾಮಿ ಶ್ರದ್ಧಾನಂದರು ಎರಡು ಬಾರಿ ಕರ್ನಾಟಕಕ್ಕೆ ಬಂದರು. ಬೆಂಗಳೂರಿನಲ್ಲಿ ಅವರ ಭಾಷಣಗಳು ಅನೇಕ ಕಡೆಗಳಲ್ಲಿ ನಡೆದು ಜನತೆಯಲ್ಲಿ ಮಿಂಚಿನ ಸಂಚಾರವಾಯಿತು. ಅವರ ತೇಜೋಮಯವಾದ ವ್ಯಕ್ತಿತ್ವಹಲವಾರು ಸಜ್ಜನರನ್ನು ವೈದಿಕ ಧರ್ಮದತ್ತ, ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿಸಿತ್ತು. ಅಸ್ಪೃಶ್ಯತಾ ನಿವಾರಣೆ ಹಾಗೂ ಸ್ತ್ರೀ ಶಿಕ್ಷಣದ ಸಂದರ್ಭದಲ್ಲಿಯಂತೂ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿತು. ಇವರಿಂದ ಪ್ರಭಾವಿತರಾದವರಲ್ಲಿ ಡಾ|| ಠಾಕೂರ್ ಸಿಂಗ್, ಸರ್ದಾರ್ ನತ್ಥಾ ಸಿಂಗ್, ರಾವ್ ಸಾಹೇಬ್, ಯಮುನಾ ಪ್ರಸಾದ್ ಶರ್ಮಾ, ಶೇಷಗಿರಿ ಶರ್ಮಾ, ಪಂ|| ಕೃಷ್ಣರಾಮಾನುಜ, ಗೋಪಾಲ ಸ್ವಾಮಿ ಮೊದಲಾದವರು ಪ್ರಮುಖರು. 
ಎಲ್ಲರಿಗಿಂತ ಹೆಚ್ಚು ಪ್ರಭಾವ ಉಂಟಾದುದು ಸ್ವಾಮಿ ಸತ್ಯಾನಂದರ ವ್ಯಕ್ತಿತ್ವದಲ್ಲಿ. ಅವರ ಜೀವನವೇ ಒಂದು ಪ್ರೇರಣಾಪ್ರದ ಸಂಗತಿಗಾಗಿದೆ.
ಸ್ವಾಮಿ ಸತ್ಯಾನಂದಜೀ – ಶ್ರದ್ಧಾನಂದ ಭವನದ ನಿರ್ಮಾತೃ, ಹಾಗೂ ಅವರ ಬಲಿದಾನ:
ಶ್ರೀ ಸ್ವಾಮಿ ಸತ್ಯಾನಂದರು ಕರ್ನಾಟಕದ ಆರ್ಯ ಸಮಾಜದ ಒಬ್ಬ ನಿರ್ಮಾತೃವಿನ ರೂಪದಲ್ಲಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ. ಆರ್ಯ ಸಮಾಜದ ರಕ್ತರಂಜಿತ ಇತಿಹಾಸದಲ್ಲಿ ಒಬ್ಬ ಮಹಾನ್ ಹುತಾತ್ಮರಾಗಿ ಅವರ ಸ್ಥಾನ ಬಹಳ ಎತ್ತರದ್ದು. ಅವರು ಕರ್ನಾಟಕದ ಒಬ್ಬ ತಪಸ್ವಿ ಸಾಧುಗಳಾಗಿದ್ದರು. ಆದರೆ ಅವರ ಜನ್ಮಉತ್ತರ ಪ್ರದೇಶದ ಶಹಜಹಾನ್ ಪುರ್ ನಲ್ಲಾಯಿತು. ಭಾರತೀಯ ಕ್ರಾಂತಿಕಾರೀ ಆಂದೋಲನದಲ್ಲಿ ಯಶಸ್ವಿ ಕ್ರಾಂತಿವೀರ ಹುತಾತ್ಮ ರಾಮಪ್ರಸಾದ್ ಬಿಸ್ಮಿಲ್ ಸಹ ಶಹಜಹಾನ್ ಪುರ ದವರೇ ಆಗಿದ್ಧರು. ಅವರು ೧೮೬೦ರಲ್ಲಿ ಜನಿಸಿದರು. ಅದೇ ಸಮಯದಲ್ಲಿ ಋಷಿ ದಯಾನಂದರು ಸತ್ಯವನ್ನು ಅರಸುತ್ತಾ ಮಥುರಾ ನಗರದಲ್ಲಿ ಗುರು ವಿರಜಾನಂದರ ಬಾಗಿಲಿಗೆ ಬಂದಿದ್ದರು. ಚಿಕ್ಕಂದಿನಲ್ಲಿ ಅವರು ಉರ್ದು, ಪಾರ್ಸಿಗಳನ್ನು ಕಲಿತರು. ಅವರು ದೊಡ್ಡ ವಿದ್ವಾಂಸರಾಗಿದ್ದರು. ಬಾಲಕರಾಗಿದ್ದಾಗ ಧಾರ್ಮಿಕ ಪ್ರವೃತ್ತಿಯವರಾಗಿದ್ದರು. ಗೃಹಸ್ಥರಾಗಿದ್ದರೂ ಸಹ ಗೃಹಸ್ಥಾಶ್ರಮದ ಸುಖ ಸೌಲಭ್ಯಗಳನ್ನು ತೊರೆದು ಸನ್ಯಾಸಿಯಾದರು. ಗುರುಗಳಿಂದ ‘ಸ್ವಾಮಿ ಸತ್ಯಾನಂದ’ ಎಂಬ ನಾಮಧೇಯ ಪಡೆದರು. ಸನ್ಯಾಸ ದೀಕ್ಷ್ಯೆಯ ಸಮಯದಲ್ಲಿ ಅವರು ಪೌರಾಣಿಕರಾಗಿದ್ದರು. ಭಾರತದ ತೀರ್ಥಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಯಾತ್ರೆ ಹೊರಟರು. ಉತ್ತರ ಪ್ರದೇಶ, ಬಿಹಾರ್, ಬಂಗಾಳ ಹಾಗೂ ಒರಿಸ್ಸಾಗಳಿಗೆ ಬಂದರು. ಪುರಿಯಲ್ಲಿ ಚಾತುರ್ಮಾಸ್ಯ ಮಾಡಿದರು. 
ಪುರಿಯಿಂದ ತಮಿಳುನಾಡಿಗೆ ಹೋದರು. ಅಲ್ಲಿಯ ಮಠ, ಮಂದಿರಗಳನ್ನು ನೋಡಿದರು. ಎಲ್ಲೋ ಸ್ನಾನ, ಎಲ್ಲೋ ಊಟ, ಕೊನೆಗೆ ರಾಮೇಶ್ವರಕ್ಕೆ ಹೋದರು. ಕೆಲವು ಸಾಧು ಸಂತರನ್ನು ಭೇಟಿ ಮಾಡಿದರು. ದಕ್ಷಿಣಕ್ಕೆ ಹೋಗುತ್ತಿದ್ದಾಗ ಸಮುದ್ರದ ಪೂರ್ವಿ ತಟದ ಮೇಲೆ ಹೋದರು.

ಹಿಂದಿರುಗುವಾಗ ಪಶ್ಚಿಮದ ದಡದ ಮಾರ್ಗ ಹಿಡಿದರು. ಸ್ವಾಮಿ ಸತ್ಯಾನಂದರು ಹಂಪೆಯನ್ನು ತಲುಪಿ ವಿಜಯನಗರದ ಅವಶೇಷಗಳು, ಪಂಪಾ ಸರೋವರ, ಸುಗ್ರೀವಾದಿಗಳ ಸ್ಥಾನಗಳನ್ನು ನೋಡಿಕೊಂಡು ಅಲ್ಲಿಯೇ ಉಳಿಯಲು ನಿರ್ಧರಿಸಿದರು. ಕೆಲವು ವರ್ಷ ಅಲ್ಲೇ ಅಲೆಯುತ್ತಿದ್ದರು. ಸಾಧುಗಳು ಎಲ್ಲಿ ಹೋದರಲ್ಲಿ ತಂಗುತ್ತಿದ್ದರು. 

ಹೀಗೆ ಅಲೆಯುತ್ತಾ ಧಾರ್ಮಿಕ ಸಾಹಿತ್ಯವನ್ನು ಅಧ್ಯಯನ ಮಾಡುತ್ತಿದ್ದರು. ಸತ್ಯವನ್ನು ಹುಡುಕುವುದರಲ್ಲಿ ಬಹಳ ಕಾತರರಾಗಿದ್ದರು. ಅದು “ಸ್ವಾಮಿ ಶ್ರದ್ಧಾನಂದ ಯುಗ”ವಾಗಿತ್ತು. ಅವರು ಆರ್ಯ ಸಮಾಜದ ಕಡೆ ಆಕರ್ಷಣೆಗೆ ಒಳಗಾದರು. 

ಒಮ್ಮೆ ಅವರು ಮೈಸೂರು ರಾಜ್ಯಯದಲ್ಲಿ ಅಲೆಯುತ್ತಿದ್ದರು.  ಆಗ ಪೂಜ್ಯ ಸ್ವಾಮಿ ಶ್ರದ್ಧಾನಂದಜೀಯವರು ಅಲ್ಲಿಗೆ ಬಂದಿದ್ದರೂ. ಅವರಿಗೆ ಸ್ವಾಮಿ ಶ್ರದ್ಧಾನಂದಜೀಯವರ ದರ್ಶನಂದ ಸೌಭಾಗ್ಯ ದೊರೆಯಿತು. ಅಯಸ್ಕಾಂತ ಕಬ್ಬಿಣವನ್ನು ಸೆಳೆದಂತಾಯಿತು. ಸ್ವಾಮೀಜಿಯವರ ವ್ಯಕ್ತಿತ್ವದ ಪ್ರಭಾವ ಇವರ ಮೇಲಾಯಿತು. ಅವರು ಸ್ವಾಮೀಜಿಯವರ ಆಜ್ಞೆಯಂತೆ ಕರ್ನಾಟಕದಲ್ಲಿ ಆರ್ಯ ಸಮಾಜದ ಕಾರ್ಯವನ್ನು ತಮ್ಮ ಕೈಗೆ ತೆಗೆದುಕೊಂಡರು. ಅವರಲ್ಲಿ ನಿಜವಾದ ಸಾಧುವಿನ ಗುಣಗಳಿದ್ದವು. ಅವರು ಬಹಳ ವಿಚಾರಶೀಲರಾಗಿದ್ದರು. ಸೇವಾಭಾವ ಅವರಲ್ಲಿ ತುಂಬಿ ತುಳುಕಾಡುತ್ತಿತ್ತು. ಸಹನಶೀಲರೂ, ತಪಸ್ವಿಗಳೂ ದೃಢ ಪ್ರತಿಜ್ಞೆಯುಳ್ಳವರೂ ಆಗಿದ್ದರು.

ಸ್ವಾಮಿ ಸತ್ಯಾನಂದರು ತಮ್ಮ ಉಳಿದ ಜೀವನವನ್ನು ಕರ್ನಾಟಕದಲ್ಲಿ ಧರ್ಮ ಪ್ರಚಾರದಲ್ಲಿ ಕಳೆಯಲು ನಿರ್ಧಾರ ಮಾಡಿದರು. ಹಾಸನದಲ್ಲಿ ಕೇಂದ್ರವನ್ನು ಸ್ಥಾಪಿಸಿ ಎರಡು ವರ್ಷಗಳವರೆಗೆ ಕರ್ನಾಟಕದಲ್ಲಿ ಆರ್ಯ ಸಮಾಜದ ಪ್ರಚಾರ ಮಾಡಿದರು. ಅವರೆನೂ ದೊಡ್ಡ ವಕ್ತಾರರು ಆಗಿರಲಿಲ್ಲ, ಕೇವಲ ಮಾತುಕತೆಯಲ್ಲಿ ಪ್ರಚಾರ ಮಾಡುತ್ತಿದ್ದರು.

ಹಿಂದಿರುಗುವಾಗ ಪಶ್ಚಿಮದ ದಡದ ಮಾರ್ಗ ಹಿಡಿದರು. ಸ್ವಾಮಿ ಸತ್ಯಾನಂದರು ಹಂಪೆಯನ್ನು ತಲುಪಿ ವಿಜಯನಗರದ ಅವಶೇಷಗಳು, ಪಂಪಾ ಸರೋವರ, ಸುಗ್ರೀವಾದಿಗಳ ಸ್ಥಾನಗಳನ್ನು ನೋಡಿಕೊಂಡು ಅಲ್ಲಿಯೇ ಉಳಿಯಲು ನಿರ್ಧರಿಸಿದರು. ಕೆಲವು ವರ್ಷ ಅಲ್ಲೇ ಅಲೆಯುತ್ತಿದ್ದರು. ಸಾಧುಗಳು ಎಲ್ಲಿ ಹೋದರಲ್ಲಿ ತಂಗುತ್ತಿದ್ದರು.

ಹೀಗೆ ಅಲೆಯುತ್ತಾ ಧಾರ್ಮಿಕ ಸಾಹಿತ್ಯವನ್ನು ಅಧ್ಯಯನ ಮಾಡುತ್ತಿದ್ದರು. ಸತ್ಯವನ್ನು ಹುಡುಕುವುದರಲ್ಲಿ ಬಹಳ ಕಾತರರಾಗಿದ್ದರು. ಅದು “ಸ್ವಾಮಿ ಶ್ರದ್ಧಾನಂದ ಯುಗ”ವಾಗಿತ್ತು. ಅವರು ಆರ್ಯ ಸಮಾಜದ ಕಡೆ ಆಕರ್ಷಣೆಗೆ ಒಳಗಾದರು.

ಒಮ್ಮೆ ಅವರು ಮೈಸೂರು ರಾಜ್ಯಯದಲ್ಲಿ ಅಲೆಯುತ್ತಿದ್ದರು.  ಆಗ ಪೂಜ್ಯ ಸ್ವಾಮಿ ಶ್ರದ್ಧಾನಂದಜೀಯವರು ಅಲ್ಲಿಗೆ ಬಂದಿದ್ದರೂ. ಅವರಿಗೆ ಸ್ವಾಮಿ ಶ್ರದ್ಧಾನಂದಜೀಯವರ ದರ್ಶನಂದ ಸೌಭಾಗ್ಯ ದೊರೆಯಿತು. ಅಯಸ್ಕಾಂತ ಕಬ್ಬಿಣವನ್ನು ಸೆಳೆದಂತಾಯಿತು. ಸ್ವಾಮೀಜಿಯವರ ವ್ಯಕ್ತಿತ್ವದ ಪ್ರಭಾವ ಇವರ ಮೇಲಾಯಿತು. ಅವರು ಸ್ವಾಮೀಜಿಯವರ ಆಜ್ಞೆಯಂತೆ ಕರ್ನಾಟಕದಲ್ಲಿ ಆರ್ಯ ಸಮಾಜದ ಕಾರ್ಯವನ್ನು ತಮ್ಮ ಕೈಗೆ ತೆಗೆದುಕೊಂಡರು. ಅವರಲ್ಲಿ ನಿಜವಾದ ಸಾಧುವಿನ ಗುಣಗಳಿದ್ದವು. ಅವರು ಬಹಳ ವಿಚಾರಶೀಲರಾಗಿದ್ದರು. ಸೇವಾಭಾವ ಅವರಲ್ಲಿ ತುಂಬಿ ತುಳುಕಾಡುತ್ತಿತ್ತು. ಸಹನಶೀಲರೂ, ತಪಸ್ವಿಗಳೂ ದೃಢ ಪ್ರತಿಜ್ಞೆಯುಳ್ಳವರೂ ಆಗಿದ್ದರು.

ಸ್ವಾಮಿ ಸತ್ಯಾನಂದರು ತಮ್ಮ ಉಳಿದ ಜೀವನವನ್ನು ಕರ್ನಾಟಕದಲ್ಲಿ ಧರ್ಮ ಪ್ರಚಾರದಲ್ಲಿ ಕಳೆಯಲು ನಿರ್ಧಾರ ಮಾಡಿದರು. ಹಾಸನದಲ್ಲಿ ಕೇಂದ್ರವನ್ನು ಸ್ಥಾಪಿಸಿ ಎರಡು ವರ್ಷಗಳವರೆಗೆ ಕರ್ನಾಟಕದಲ್ಲಿ ಆರ್ಯ ಸಮಾಜದ ಪ್ರಚಾರ ಮಾಡಿದರು. ಅವರೆನೂ ದೊಡ್ಡ ವಕ್ತಾರರು ಆಗಿರಲಿಲ್ಲ, ಕೇವಲ ಮಾತುಕತೆಯಲ್ಲಿ ಪ್ರಚಾರ ಮಾಡುತ್ತಿದ್ದರು.

(to be continued).. 

I am tab content. Click edit button to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.